ಚೇರ್ಕಾಡಿ ದೊಡ್ಡಮನೆ

ಶ್ರೀಮತಿ ಸುಲೋಚನಾ ಶೆಟ್ಟಿ, ಕೊಡವೂರು

ಅನಿಸಿಕೆ

"

ಸುಲೋಚನಾ ಕೊಡವೂರು ರವರು ಒಬ್ಬ ತೀಕ್ಷ್ಣ ಬುದ್ಧಿಮತ್ತೆಯ ಶಿಕ್ಷಕಿಯಾಗಿದ್ದು, ಇವರ ಸ್ವಾನುಭವ ಹಾಗೂ ರೋಗಿಗಳ ಚಿಕಿತ್ಸೆ ಫಲಕಾರಿಯ ಆಧಾರದ ಯುರೀನ್ ತೆರಪಿಯು ಪಾಶ್ಚಾತ್ಯ ವೈದ್ಯಕೀಯ ಕ್ಷೇತ್ರದ ಫೀಕಲ್ ಟ್ರೀಟ್ಮೆಂಟ್ ಎನ್ನುವ ಪದ್ಧತಿಗೆ ಸಮಾನವಾಗಿದೆ"

ಪದ್ಮವಿಭೂಷಣ ಡಾ.ಬಿ.ಎಂ.ಹೆಗ್ಡೆ (ಖ್ಯಾತ ವೈದ್ಯರು, ಲೇಖಕರು)-

ಅನಿಸಿಕೆ

"

ಸುಲೋಚನಾ ಕೊಡವೂರು ರವರು ಒಬ್ಬ ಶಿಕ್ಷಕಿಯಾಗಷ್ಟೇ ಸೀಮಿತವಾಗದೆ, ಸಾಕ್ಷರತೆ, ಸಂಪನ್ಮೂಲ ವ್ಯಕ್ತಿಯಾಗಿ, ಸಾಮಾಜಿಕ ಸಂಘಟಕಿಯಾಗಿ, ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.ಇವರ ಸಾಧನೆ ಅಮೋಘ ಹಾಗೂ ಇಂದಿನ ಪೀಳಿಗೆಗೆ ಪ್ರೇರಣೆ ನೀಡುವಂತದ್ದು

ಶ್ರೀಮತಿ ಜಾನಕಿ ಬ್ರಹ್ಮಾವರ (ಮಾಜಿ ಅಧ್ಯಕ್ಷರು-ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ)

ಅನಿಸಿಕೆ

"

ಸುಲೋಚನಾ ಅಮ್ಮನವರ ಬಗ್ಗೆ ನಾನು ಇತರರಿಂದ ತಿಳಿದುಕೊಂಡು, ಅವರೊಂದಿಗೆ ಆರೋಗ್ಯ ಚಿಕಿತ್ಸೆಯ ಬಗ್ಗೆ ಚರ್ಚಿಸಿ, ಅದರ ಲಾಭಗಳ ಬಗ್ಗೆ ಜನರಿಗೆ ಉಪಯೋಗವಾಗಲೆಂದು ನಮ್ಮ ಪ್ರಕಾಶನದಿಂದಲೇ ಪುಸ್ತಕವನ್ನು ಹೊರತಂದಿದ್ದೇವೆ.ಇದರ ಉಪಯುಕ್ತತೆ ಸಮಾಜಕ್ಕೆ ಖಂಡಿತವಾಗಿಯೂ ದೊಡ್ಡ ಕೊಡುಗೆಯಾಗಲಿದೆ

ಶ್ರೀ ಬಸವಾನಂದ ಸ್ವಾಮೀಜಿ (ಶ್ರೀ ಗುರು ಬಸವ ಮಹಾಮನೆ, ಮನಗುಂಡಿ, ಧಾರವಾಡ)

heavy

ಶ್ರೀಮತಿ ಸುಲೋಚನಾ ಶೆಟ್ಟಿ

ಅವರ ಕಿರು ಪರಿಚಯ

ಚೇರ್ಕಾಡಿ ದೊಡ್ಡಮನೆ ಶ್ರೀಮತಿ ಸುಲೋಚನಾ ಶೆಟ್ಟಿ, ಕೊಡವೂರು ಅಭಿನಂದನಾ ಸಮಾರಂಭ

ಶಿಕ್ಷಕಿ, ಸಾಮಾಜಿಕ ಸಂಘಟಕಿ, ಹೋರಾಟಗಾರ್ತಿ, ಸಾಹಿತಿ, ಕವಯತ್ರಿ, ಸಹಕಾರಿ ಕ್ಷೇತ್ರದ ಧುರೀಣೆ, ಆರೋಗ್ಯ ಕಾರ್ಯಕರ್ತೆ ಚೇರ್ಕಾಡಿ ದೊಡ್ಡಮನೆ ಶ್ರೀಮತಿ ಸುಲೋಚನಾ ಶೆಟ್ಟಿ ಕೊಡವೂರು ರವರ ಸಾರ್ಥಕತೆಯ 75ರ ಸಂಭ್ರಮ ಕಾರ್ಯಕ್ರಮ ಇಂದು ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಚೇರ್ಕಾಡಿ ದೊಡ್ಡಮನೆ ಹಿರಿಯರಾದ ಶ್ರೀ ಜಯರಾಮ್ ಹೆಗ್ಡೆ, ಅತಿಥಿಗಳಾಗಿ ತುಳುಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಎಸ್ ವಿ ಎಸ್ ವಿದ್ಯಾವರ್ಧಕ ಸಂಘದ ಸಂಚಾಲಕರಾದ ಶ್ರೀ ಸತ್ಯೇ0ದ್ರ ಪೈ, ಪಡಿ ವೆಲೋರೆಡ್ ಸಂಸ್ಥೆಯ ನಿರ್ದೇಶಕರಾದ ರೆನ್ನಿ ಡಿಸೋಜ, ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಲದ ನಿರ್ದೇಶಕರಾದ ಶ್ರೀ ಇಂದ್ರಾಳಿ ಜಯಕರ್ ಶೆಟ್ಟಿ, ದ.ಕ. ಹಾಗೂ ಉಡುಪಿ ಸಹಕಾರಿ ಉಪನಿಬ0ದಕರಾದ ಶ್ರೀ ಪ್ರವೀಣ್ ಬಿ ನಾಯಕ್, ನಗರ ಸಭೆ ಸದಸ್ಯರಾದ ಶ್ರೀ ಶ್ರೀಶ ಆಚಾರ್ಯ, ವಿಜಯ್ ಕೊಡವೂರುರವರು ವಹಿಸಿದ್ದರು. ಸನ್ಮಾನಿತರ ಹಿತೈಷಿಗಳು,ಕುಟುಂಬಸ್ಥರು, ಸಹುದ್ಯೋಗಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಜಾನಕಿ ಬ್ರಹ್ಮಾವರರವರು, "ಸುಲೋಚನಾ ಕೊಡವೂರು ಓರ್ವ ಧೀಮಂತ ಮಹಿಳೆ. ಇವರು ಶಿಕ್ಷಕಿ, ಸಾಹಿತಿ, ಸಂಘಟಕಿ, ಆರೋಗ್ಯ ಕಾರ್ಯಕರ್ತೆ ಹೀಗೆ ಹತ್ತಾರು ಮಜಲುಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ ಮೇರು ವ್ಯಕ್ತಿತ್ವ. ಅವರ ವ್ಯಕ್ತಿತ್ವದ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು ಹಾಗೇ ಅವರ ಜೀವನ ನಮಗೆಲ್ಲರಿಗೂ ಮಾದರಿ" ಎಂದರು.


ಮತ್ತೋರ್ವ ಅತಿಥಿಯಾಗಿದ್ದ ರೆನ್ನಿ ಡಿಸೋಜರವರು ಮಾತನಾಡಿ, "ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ಸುಲೋಚನಾರವರು ಒಂದು ಬಹುದೊಡ್ಡ ಆಸ್ತಿ. ಅವರು ಸಾಕ್ಷರತಾ ಆಂದೋಲನದಲ್ಲಿ ನಿರ್ವಹಿಸಿದ ಪಾತ್ರ ಅವಿಭಜಿತ ದ.ಕ. ಜಿಲ್ಲೆಗೆ ಒಂದು ಮುಖ್ಯ ಕೊಡುಗೆ"ಎಂದು ತಿಳಿಸಿದರು.


ಕಾರ್ಯಕ್ರಮಕ್ಕೆ ವಿಡಿಯೋ ಸಂದೇಶದ ಮೂಲಕ ಪದ್ಮವಿಭೂಷಣ ಡಾ.ಬಿ.ಎಂ.ಹೆಗ್ಡೆ, ಮನಗುಂಡಿಯ ಶ್ರೀ ಬಸವಾನಂದ ಸ್ವಾಮೀಜಿಯವರು 75ರ ಸಾರ್ಥಕ ಜೀವನವನ್ನು ತಮ್ಮ ಆದರ್ಶಗಳಿಂದ ಔನತ್ಯಕ್ಕೇರಿಸಿದ ಸುಲೋಚನಾ ಶೆಟ್ಟಿಯವರಿಗೆ ತಮ್ಮ ಶುಭಸಂದೇಶಗಳನ್ನು ತಿಳಿಸಿದರು.


ಇದೇ ಸಂದರ್ಭದಲ್ಲಿ ಸುಲೋಚನಾ ಕೊಡವೂರುರವರ 75ರ ಕುರಿತ ಕಿರುಚಿತ್ರ ಹಾಗೂ ವೆಬ್ಸೈಟ್ ಲೋಕಾರ್ಪಣೆ ಮಾಡಲಾಯ್ತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಲೋಚನಾ ಕೊಡವೂರುರವರು, "ನಾನು ನನ್ನ ಬಯಕೆಯಂತೆಯೇ ಓರ್ವ ಶಿಕ್ಷಕಿಯಾಗಿದ್ದು, ಹತ್ತು ಹಲವು ಕ್ಷೇತ್ರದ ಅನುಭವವನ್ನು ಸದಾ ಪಡೆದದ್ದು ನನ್ನನ್ನು ಒಬ್ಬ ಉತ್ತಮ ಶಿಕ್ಷಕಿಯನ್ನಾಗಿ ಹಾಗೂ ವ್ಯಕ್ತಿತ್ವವನ್ನು ಹೊಂದುವಂತೆ ಮಾಡಿತು. ನನ್ನ ಜೀವನಕ್ಕೆ ಶಿಕ್ಷಕರಾಗಿದ್ದ ನನ್ನ ತಂದೆಯೇ ನನ್ನೆಲ್ಲ ಸಾಧನೆಗೆ ಪ್ರೇರಣೆ. ಅವರ ಶಿಸ್ತು, ಸಮಯಪಾಲನೆ ಇತ್ಯಾದಿ ಗುಣಗಳು ನನ್ನ ವೃತ್ತಿಯಲ್ಲಿ ನಾನು ಯಶಸ್ಸು ಕಾಣುವಂತೆ ಮಾಡಿತು.ನನ್ನ ನೇರ ನುಡಿ ನಿಷ್ಠುರವಾದಿತನವೇ ನನ್ನ ಶಕ್ತಿ. ಇಂದಿನ ಈ ಸಂಭ್ರಮ ನನ್ನಗಷ್ಟೇ ಅಲ್ಲದೇ, ಸಮಾಜಮುಖಿಯಾಗಿ ಕೆಲಸ ಮಾಡುವ ಇನ್ನಷ್ಟು ಜನರಿಗೆ ಪ್ರೇರಣೆ ಹಾಗೂ ಸ್ಫೂರ್ತಿಯಾಗಲಿ ಎಂಬುದೇ ನನ್ನ ಹರಕೆ"ಎಂದು ನುಡಿದರು.


ಸಭೆಯ ಪ್ರಾಸ್ತಾವಿಕ ನುಡಿಗಳನ್ನು ಶ್ರೀ ಪ್ರೇಮ್ ಪ್ರಸಾದ್ ಶೆಟ್ಟಿ, ವಂದನಾರ್ಪಣೆಯನ್ನು ಶ್ರೀ ಶಿವರಾಮ್ ಅವರು ನೆರವೇರಿಸಿದರು. ಶ್ರೀ ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ